ಸ್ಪಿನ್ನಿಂಗ್‌ ಸ್ಕಿನ್ಸ್‌, 2022

ದೇಹವು ಈಗ ತನ್ನ ಪ್ರಾಕೃತಿಕ ಜೀವ ತತ್ವಗಳನ್ನು ಮೀರಿದೆ, ಯಾಂತ್ರಿಕ, ಸಂಗಣಕ ಮತ್ತು ಬದಲಿ ಅಳವಡಿಕೆಗಳ ಪ್ರಕಿರಿಯೆಗೆ ಒಳ ಪಟ್ಟಿದೆ, ಅಲ್ಲದೇ, ಈ ಕೃತಕ ಅಳವಡಿಕೆಗಳನ್ನು ಕ್ರಿಯಾತ್ಮಕವಾಗಿ ನಿಯಂತ್ರಿಸುತ್ತಿದೆ.



ವೀಡಿಯೋ ಸಂಕಲನ

ಈ ಪ್ರದರ್ಶನದಲ್ಲಿ, ದೇಹದ ಪ್ರಕ್ರಿಯೆಗಳ ಸಮಸ್ಯೆಗಳೇನು, ದೈಹಿಕ ಅಂಶಗಳೆಂದರೇನು, ಮಾನವೀಯತೆ ಎಂದರೇನು, ನಮ್ಮ ದೇಹದಲ್ಲಿ, ಅಹಂ ಎಂಬ ನಮ್ಮ ತನವನ್ನು ಯಾವುದು ಉತ್ಪತ್ತಿ ಮಾಡುತ್ತದೆ, ದೇಹಕ್ಕೆ ಯಾಂತ್ರಿಕ ಮತ್ತು ಸಂಗಣಕ ಮೂಲದ ಕೃತಕ ಅಳವಡಿಕೆಗಳನ್ನು ಅಳವಡಿಸಿದರೆ ನಮ್ಮಲ್ಲಿರುವ ಚೇತನದ ಅರಿವು ಹೇಗಾಗುತ್ತದೆ ಎಂದು ತಿಳಿದುಕೊಳ್ಳ ಬಹುದು. ನಮ್ಮ ಶರೀರ, ಚೇತನ ಮತ್ತು ಆತ್ಮಗಳ ವಿಷಯವನ್ನು ಈ ಪ್ರದರ್ಶನದ ಮೂಲಕ ವಿಮರ್ಶಿಸಲಾಗಿದೆ.

ಪ್ರೊಪೆಲ್‌, 2015 : ಶರೀರಕ್ಕೆ ಕೃತಕವಾದ ಯಾಂತ್ರಿಕ ರಬಾಟ್‌ ತೋಳನ್ನು ಅಳವಡಿಸಲಾಗಿದೆ. ಅದರ ಪಥ, ವೇಗ ಮತ್ತು ಭೌತಿಕ ನಿಲುವನ್ನು ಖಚಿತವಾಗಿ ನಿಗದಿ ಪಡಿಸ ಬಹುದು.

ರಿ-ವೈರ್ಡ್‌ / ರಿಮಿಕ್ಸ್ಡ್‌, 2016: 5 ದಿನಗಳ ಅವಧಿಯಲ್ಲಿ, ಪ್ರತಿದಿನವೂ 6 ಗಂಟೆಗಳ ಕಾಲ, ವ್ಯಕ್ತಿಯು, ಲಂಡನ್ನಿನಲ್ಲಿರುವ ಯಾರದೋ ಕಣ್ಣಿನ ಮೂಲಕ ನೋಡ ಬಹುದು, ನ್ಯೂಯಾರ್ಕ್‌ ನ ಯಾರದೋ ಕಿವಿಗಳ ಮೂಲಕ ಕೇಳ ಬಹುದು. ಆದರೆ, ಯಾರು ಬೇಕಾದರೂ ಎಲ್ಲಿಂದ ಬೇಕಾದರೂ ಕಲಾವಿದರ ಬಲ ತೋಳನ್ನು ದೂರದಿಂದಲೇ ನಿಯಂತ್ರಿಸ ಬಹುದು.

ಸ್ಟಿಕ್‌ ಮನ್‌ / ಮಿನಿ ಸ್ಟಿಕ್‌ ಮನ್‌, 2018: 5 ಗಂಟೆಗಳ ಕಾಲದ ಈ ಪ್ರದರ್ಶನದಲ್ಲಿ, ಪೂರ್ಣ ಪ್ರಮಾಣದ ಅಸ್ತಿ ಪಂಜರವು ಶರೀರಕ್ಕೆ ಚಾಲನೆಯನ್ನು ನೀಡುತ್ತದೆ. ಸಂದರ್ಶಕರು, ತಮ್ಮ ಇಚ್ಛೆಯಂತೆ ಮಿನಿ ಸ್ಟಿಕ್‌ ಮನ್‌ ನ ಅಂಗಾಂಗಗಳು, ಕಾಲುಗಳನ್ನು ತಿರುಗಿಸಿ ಬೇಕಾದ ಭಂಗಿಯನ್ನು ಅಳವಡಿಸಬಹುದು.

ರಿಕ್ಲೈನಿಂಗ್‌ ಸ್ಟಿಕ್‌ ಮನ್‌, 2020: 5 ಗಂಟೆಗಳ ಕಾಲದ ಈ ಪ್ರದರ್ಶನದಲ್ಲಿ, ದೇಹವನ್ನು 9 ಮೀ ಉದ್ದ, 4 ಮೀ ಎತ್ತರದ ಸ್ಟಿಕ್‌ ಆಕಾರದ ರಬಾಟ್‌ ನ ಆಕಾರದ ಮೇಲೆ ನಿಲ್ಲಿಸಲಾಗಿದ್ದು, ಯಾಂತ್ರಿಕ ರಬ್ಬರ್‌ ಮಾಂಸ ಪೇಶಿಗಳಿಂದ ಚಾಲನೆ ನೀಡಲಾಗಿದೆ. ಯಾರು ಬೇಕಾದರೂ ಎಲ್ಲಿಂದ ಬೇಕಾದರೂ ದೂರದಿಂದಲೇ ಈ ರಬಾಟ್‌ ನ ಚಲನವಲನಗಳನ್ನು ನಿಯಂತ್ರಿಸ ಬಹುದು.