ಈ ವೀಡಿಯೋವನ್ನು ನೋಡುತ್ತಿದ್ದಾಗ, ರೇಖಾ ಆಕಾರಗಳು ವಾಸ್ತವ ಸಜೀವ ವಸ್ತುಗಳೆಂಬಂತೆ ಅವುಗಳ ಭಾವನೆಗಳು ಮತ್ತು ಆಲೋಚನೆಗಳ ಬಗ್ಗೆ ಚಿಂತಿಸುತ್ತಿದ್ದಿರೇನು?

ಈ ಬಗೆಯ ಚಿಂತನೆಯು ನಿಮಗೆ ಸಹಜವಾಗಿಯೇ ರೂಪಗೊಳ್ಳುತ್ತದೆ. ಮಾತಿನ ಹಾಗೂ ಮೌನದ ಮುಖಚರ್ಯೆಗಳಿಂದ ಮತ್ತೊಬ್ಬರ ಆಲೋಚನೆಗಳು, ಉದ್ದೇಶಗಳು ಮತ್ತು ಭಾವನೆಗಳನ್ನು ನಾವು ತಿಳಿದುಕೊಳ್ಳುತ್ತೇವೆ.

ನಮಗೆ ದೊರಕಿರುವ ಈ ಕ್ಷಮತೆಯನ್ನು ಸಾಮಾಜಿಕ ಬುದ್ಧಿ ಶಕ್ತಿ ಎಂದು ಹೆಸರಿಸಲಾಗಿದೆ, ಪ್ರಾಣಿ ವರ್ಗದಲ್ಲಿಯೇ ಮಾನವ ಜಾತಿಗೆ ಮೀಸಲಾದ ವಿಶೇಷ ಸಾಮರ್ಥ್ಯವಿದು.

ಸೂಕ್ಷ್ಮ ಸುಳಿವುಗಳಂತೆ ತೋರುವ ಆಲೋಚನೆಗಳು ಮತ್ತು ಭಾವನೆಗಳನ್ನು ಅರ್ಥೈಸಲು ನಾವು ರೂಪಿಸಲ್ಪಟ್ಟಿದ್ದೇವೆಯೇ?

ಸಾಮಾಜಿಕ ಬುದ್ಧಿ ಶಕ್ತಿಯು ಹೇಗೆ ಉಗಮಿಸುತ್ತದೆ?

ಸಾಮಾಜಿಕ ಬುದ್ಧಿ ಶಕ್ತಿಯು ಹೇಗೆ ಉಗಮಿಸುತ್ತದೆ?

ಅರ್ಥವನ್ನು ಹುಡುಕುವುದು ನಮ್ಮ ಸ್ವಾಭಾವಿಕ ನಡವಳಿಕೆಯೇ?

ಮೆದುಳಿನ ಈ ಭಾಗಗಳು ಒಟ್ಟಿಗೆ ಸೇರಿ ಮೆದುಳಿನ ಮುಖ್ಯವಾದ ಹಂದರವನ್ನು ರೂಪಿಸುತ್ತವೆ – ಡಿಫಾಲ್ಟ್‌ ಮೋಡ್‌ ನೆಟ್‌ ವರ್ಕ್‌ (ಡಿ.ಎಂ.ಎನ್)

ನಾವು ಯಾವುದೇ ಬಗೆಯ ಕಾರ್ಯ ಚಟುವಟಿಕೆಯಲ್ಲಿ ತೊಡಗಿರದೇ ಇರುವ ಸಮಯದಲ್ಲಿ, ನಮ್ಮಷ್ಟಕ್ಕೆ ನಾವು ಏಕಾಂಗಿಯಾಗಿ ನಮ್ಮ ಆಲೋಚನೆಗಳಲ್ಲಿ ಮುಳುಗಿರುವಾಗ ಡಿ.ಎಂ.ಎನ್ ಈ ಬಗೆಯಲ್ಲಿ ಚಾಲನೆಗೊಳ್ಳುತ್ತದೆ:

ಅನ್ಯ ವ್ಯಕ್ತಿಗಳ ಆಲೋಚನೆಗಳು, ಭಾವನೆಗಳು ಮತ್ತು ಉದ್ದೇಶಗಳ ಬಗ್ಗೆ ಗಮನವಿಟ್ಟು ಪರಿಶೀಲಿಸುವಾಗ, ಡಿ.ಎಂ.ಎನ್ ಚಾಲನೆಗೊಂಡಿರುತ್ತದೆ.

ನಮ್ಮ ಸ್ವಂತ ನೆನಪುಗಳನ್ನು ಸ್ಮರಿಸಿಕೊಳ್ಳುವಾಗ ಮತ್ತು ಭವಿಷ್ಯದ ವಿಷಯಗಳ ಬಗ್ಗೆ ಚಿಂತಿಸುವಾಗಲೂ ಡಿ.ಎಂ.ಎನ್ ಚಾಲನೆಗೊಂಡಿರುತ್ತದೆ.

ಎಲ್ಲ ಮಾನವರೂ ಸಾಮಾಜಿಕ ಮಾಹಿತಿಯನ್ನು ಸಮನಾಗಿ ವಿಮರ್ಶಿಸುವ, ಸಂಶ್ಲೇಷಿಸುವ ಕ್ಷಮತೆಯನ್ನು ಹೊಂದಿರುತ್ತಾರೆಯೇ?

ಇತರರಿಗೆ ಹೋಲಿಸಿದರೆ, ಕೆಲವರು ಮಾತ್ರವೇ, ಸಾಮಾಜಿಕ ಮಾಹಿತಿಯನ್ನು ಹೆಚ್ಚು ಆಳವಾಗಿ ವಿಮರ್ಶಿಸುವ, ಸಂಶ್ಲೇಷಿಸುವ ಕ್ಷಮತೆಯನ್ನು ಹೊಂದಿರುತ್ತಾರೆಯೇ?

ಮತಿ ಭ್ರಮಣೆ (ಸ್ಕೀಜ್ಸೋಫ್ರೇನಿಯಾ) ರೋಗದಲ್ಲಿ ರೋಗಿಗಳು ಸಾಮಾಜಿಕ ಮಾಹಿತಿಯನ್ನು ವಿಮರ್ಶಿಸುವ, ಸಂಶ್ಲೇಷಿಸುವ ಕ್ಷಮತೆಯನ್ನು ಕಳೆದುಕೊಂಡಿರುತ್ತಾರೆ.

ಮತಿ ಭ್ರಮಣೆ (ಸ್ಕೀಜ್ಸೋಫ್ರೇನಿಯಾ) ರೋಗದಿಂದ ಬಳಲುತ್ತಿರುವ ವ್ಯಕ್ತಿಗಳ ಮೆದುಳು ಹೇಗೆ ವಿಭಿನ್ನವಾಗಿರುತ್ತದೆ?

ಮತಿ ಭ್ರಮಣೆ (ಸ್ಕೀಜ್ಸೋಫ್ರೇನಿಯಾ) ರೋಗದಲ್ಲಿ ಡಿ.ಎಂ.ಎನ್ ನರ ತಂತುಗಳು ವಿಭಿನ್ನವಾಗಿರುತ್ತದೆ.

ಮತಿ ಭ್ರಮಣೆ (ಸ್ಕೀಜ್ಸೋಫ್ರೇನಿಯಾ) ರೋಗದಿಂದ ಬಳಲುತ್ತಿರುವ ವ್ಯಕ್ತಿಗಳ ಮೆದುಳಿನಲ್ಲಿ, ಡಿ.ಎಂ.ಎನ್ ನ ದುರ್ಬಲ ಸಂಪರ್ಕವನ್ನು ಹಸಿರು ಸಂಕೇತಗಳ ಮೂಲಕ ಗುರುತಿಸಲಾಗಿದೆ.

ಅತಿರೇಕದ ಕ್ಷಮತೆಯು ವಿಕಲತೆಗೆ ಕಾರಣವಾಗ ಬಹುದೇ?

ಅರ್ಥೈಸುವುದಕ್ಕೆ ನಾವು ತೆರಬೇಕಾದ ಬೆಲೆಯು ಮತಿಭ್ರಮಣೆಯೇ (ಸ್ಕೀಜ್ಸೋಫ್ರೇನಿಯಾ) ?

ರೀ-ಪ್ಲೇ ಮಾಡಲು, (ಮತ್ತೊಮ್ಮೆ ಕೇಳಲು / ವೀಕ್ಷಿಸಲು) ಇಲ್ಲಿ ಕ್ಲಿಕ್‌ ಮಾಡಿ