ಗತ ಕಾಲದಲ್ಲಿ ನಡೆದು ಹೋಗಿರುವ ಅಚಾತುರ್ಯಗಳು ಅಥವಾ ಮಾಡದೇ ಉಳಿದು ಹೋದ ಕಾರ್ಯಗಳು, ಹಲವು ವರ್ಷಗಳ ನಂತರವೂ ತಮ್ಮದೇ ಪರಿಣಾಮಗಳನ್ನು ಬೀರುತ್ತವೆ, ಆದರೆ ಆಗ ಕಾಲವು ಕೈ ತಪ್ಪಿ ಹೋಗಿರುತ್ತದೆ, ಯಾವುದೇ ಸಂಗತಿಯು ಮುಗಿದು ಹೋಯಿತು ಎಂದು ಭಾವಿಸಲು ಸಾಧ್ಯವಿಲ್ಲ , ಹಾಗೆ ಅಂದುಕೊಳ್ಳುವುದು ಒಳ್ಳೆಯದೂ ಅಲ್ಲ, ಬುದ್ಧಿವಂತಿಕೆಯೂ ಅಲ್ಲ.

ʼದಿ ಲಾಸ್ಟ್‌ ಲೈಟ್‌ ಆಫ್‌ ದಿ ಸನ್‌ʼ ಕೃತಿಯಲ್ಲಿ ಗಯ್‌ ಗಾವ್ರಿಯಲ್‌ನ ಹೇಳಿಕೆ.

ಯಾವುದೇ ವಿಚಾರವನ್ನು ವ್ಯಕ್ತ ಪಡಿಸುವಾಗ, ಅದರ ಹಿಂದಿನ ಇತಿಹಾಸವನ್ನು ತಿಳಿದುಕೊಳ್ಳುವುದು ಬಹು ಮುಖ್ಯವಾಗುತ್ತದೆ. ಸ್ವತಂತ್ರ ಪೂರ್ವ ಕಾಲದ ಭಾರತೀಯ ಸಮಾಜದಲ್ಲಿ, 1947ರ ವರೆಗೂ, ವೈದ್ಯಕೀಯ ವಿಶೇಷತೆಯಾದ ಮನೋರೋಗ ಚಿಕಿತ್ಸೆಯು ಕೇವಲ ಮನೋ ರೋಗ ಆಸ್ಪತ್ರೆಗಳಿಗೆ ಮೀಸಲಾಗಿತ್ತು. ಭಾರತದಂತಹ ದೊಡ್ಡ ದೇಶದಲ್ಲಿ ಸ್ವತಂತ್ರದ ಕಾಲಕ್ಕೆ ಸುಮಾರು 20 ಮನೋ ರೋಗ ಆಸ್ಪತ್ರೆಗಳು ಅಸ್ತಿತ್ವದಲ್ಲಿ ಇದ್ದವು.

ಕಳೆದ ಐವತ್ತು ವರ್ಷಗಳ ಹಿನ್ನೆಲೆಯನ್ನು ನೋಡಿದರೆ, ಪಾಶ್ಚಿಮಾತ್ಯ ದೇಶಗಳಲ್ಲಿ, ಮನೋರೋಗ ಆಸ್ಪತ್ರೆಗಳ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ, ನಕಾರಾತ್ಮಕ ಭಾವನೆಯೇ ಹೆಚ್ಚಾಗಿದೆ. ʼಸರಿಸೃಪಗಳಿರುವ ಕೊಳಕು, ಅಸಹ್ಯ ಅಮಾನುಷ ತಾಣʼದಂತೆ ಇವುಗಳನ್ನು ಪರಿಗಣಿಸಲಾಗಿದೆ. ಆದಕಾರಣ, ʼಅ-ಸಂಘಟೀಕರಣʼ ಕಾರ್ಯವು ಚಾಲನೆಯನ್ನು ಪಡೆದಿದ್ದು, ಬಹಳಷ್ಟು ಮನೋರೋಗ ಆಸ್ಪತ್ರೆಗಳನ್ನು ಮುಚ್ಚುವ ಕಾರ್ಯ ನಡೆದಿದೆ. ಒಂದು ಕಾಲದಲ್ಲಿ ನೂರಾರು ಮನೋರೋಗ ಆಸ್ಪತ್ರೆಗಳನ್ನು ಹೊಂದಿದ್ದ ಸಂಯುಕ್ತ ರಾಜ್ಯಗಳಲ್ಲಿ, ಸಮುದಾಯದ ಆರೋಗ್ಯ ಆರೈಕೆಯನ್ನು ಮನಗಂಡು, ಪ್ರಸಕ್ತ, ವ್ಯವಸ್ಥಿತವಾಗಿ ಬಹಳಷ್ಟು ಮನೋರೋಗ ಆಸ್ಪತ್ರೆಗಳನ್ನು ಮುಚ್ಚಲಾಗುತ್ತಿದೆ.

ಮನೋರೋಗ ಆಸ್ಪತ್ರೆಗಳು ಹೆಚ್ಚಾಗಿ ಅಮಾನುಷ, ಕ್ರೂರ ಕೃತ್ಯಗಳಿಗೆ ತಾಣವಾಗಿದ್ದವು ಎಂಬುದು ಸತ್ಯ. ಆದರೆ ಮನೋರೋಗ ಆಸ್ಪತ್ರೆಗಳನ್ನು ಮುಚ್ಚುವುದರಿಂದ ಮನೋ ರೋಗಿಗಳಿಗೆ ಬೇಕಾದ ಆರೈಕೆ ಮತ್ತು ಸಹಾಯವನ್ನು ಕಲ್ಪಿಸಲಾಗುತ್ತಿದೆಯೇ ಎಂಬುದರ ಬಗ್ಗೆ ವಿಶ್ವದೆಲ್ಲೆಡೆ ವಾದ ವಿವಾದಗಳು ನಡೆಯುತ್ತಿವೆ. ಅಮೇರಿಕಾದ್ಯಂತ ಗಂಭೀರ ಮನೋರೋಗದಿಂದ ಬಳಲುತ್ತಿರುವ ಜನರು, ನಿರಾಶ್ರಿತರು, ತಾಣಗಳಿಲ್ಲದೇ ಬೀದಿಗಳಲ್ಲಿ ಮತ್ತು ಕಾರಾಗೃಹಗಳಲ್ಲಿ ಇರುವ ಹಲವರ ಗತಿ ಏನು ಎಂಬುದೇ ಪ್ರಶ್ನೆಯಾಗಿದೆ, ಕೆಲವು ಬಾರಿ ಒಳ್ಳೆಯ ಉದ್ದೇಶದಿಂದ ಎಸಗಿದ ಕೃತ್ಯಗಳು ಅಹಿತಕರ ಪರಿಣಾಮಗಳನ್ನು ಉಂಟುಮಾಡ ಬಹುದು.

ಪ್ರಸ್ತುತ ಕೃತಿಯು, ಭಾರತೀಯ ಮನೋರೋಗ ಆಸ್ಪತ್ರೆಗಳ ಇತಿಹಾಸದ ಕಾಲಾನುಕ್ರಮಣಿಯನ್ನು ನಿರೂಪಿಸುತ್ತದೆ. ಚರಿತ್ರೆಯನ್ನು ಹುಡುಕಿದಂತೆಲ್ಲ, ಆಶ್ರಯಧಾಮಗಳ, ಆಸ್ಪತ್ರೆಗಳ ಬೃಹತ್ ಗೋಡೆಗಳ ಹಿಂದಿನ ರೋಚಕ ಕಥಾನಕಗಳು ಬೆಳಕಿಗೆ ಬಂದಿವೆ, ಹಾಗೆಯೇ ಸಮಾಜದ ದೃಷ್ಟಿಯಲ್ಲಿ ಮತಿಭ್ರಮಣೆಯ ಬಗ್ಗೆ ಇರುವ ಕಲ್ಪನೆಗಳು ಸಹ ಗೋಚರವಾಗುತ್ತವೆ.

ಸ್ವಾಗತ